ಬೆಂಗಳೂರು: ನೋಡಿ ಸ್ವಾಮಿ ಲಂಚ ಎಲ್ಲಿಲ್ಲ?! ಜಾತಿ ದೃಢೀಕರಣ ಪತ್ರ ಮಾಡ್ಸೋದ್ರೊದಿಂದ ಹಿಡಿದೂ, ಆಸ್ಪತ್ರೆಲೀ ಡಾಕ್ಟರ್ ನೋಡೋಕೂ ಮುಂಚೆ ಜವಾನ್ ಕೈಗೆ ಹತ್ತು ರೂಪಾಯಿ ಇಡ್ಬೇಕು… ಲಂಚ..ಲಂಚ…ಲಂಚ ಸಾಕೋಪ್ಪೋ ಸಾಕು…! ಎಂದು ರೋಸಿ ಹೋಗಿದ್ದ ಜನರಿಗೆ ಕರ್ನಾಟಕ ಲೋಕಾಯುಕ್ತ ಹೊಸ ಅಸ್ತ್ರವಾಗಿತ್ತು. ಆದರೆ ಭ್ರಷ್ಟರಿಂದ ಬೇಸತ್ತಿದ್ದ ಜನರು, ಆಂತಹ ಅಧಿಕಾರಿ ವಿರುದ್ಧ ದೂರು ನೀಡಲು ಲೋಕಾಯುಕ್ತ ಕಚೇರಿ ಮೆಟ್ಟಿಲೇರಬೇಕಿತ್ತು. ಆದರೆ ಈಗ ಇದು ಅಷ್ಟೊಂದು ಕಷ್ಟವಲ್ಲ… ನೀವಿದ್ದಲಿದ್ದಲ್ಲೇ ದೂರು ನೀಡಬಹುದು! [...]
↧